ಐ.ಎನ್.ಎಸ್ ವಿಕ್ರಮಾದಿತ್ಯ (ಸಂಸ್ಕೃತ: विक्रमादित्य, Vikramāditya) ಎನ್ನುವುದು ಸೋವಿಯೆಟ್ ರಷ್ಯಾದ ಹಳೆಯ ವಿಮಾನ ಧಾರಕ ನೌಕೆಯಾದ ಅಡ್ಮಿರಲ್ ಗೋರ್ಶ್'ಕೋವ್ನ ಹೊಸ ನಾಮಧೇಯವಾಗಿದೆ. ಇದನ್ನು ಭಾರತವು ರಷ್ಯಾದಿಂದ ಖರೀದಿಸಿದ್ದು ೨೦೧೨ ರ ವೇಳೆಗೆ ಇದು ಭಾರತೀಯ ನೌಕಾಸೇನೆಯಲ್ಲಿ ಸೇವಾನಿರತವಾಗುವ ಅಪೇಕ್ಷೆಯಿದೆ. ವಿಕ್ರಮಾದಿತ್ಯ ನೌಕೆಯು ೧೯೭೮-೧೯೮೨ರಲ್ಲಿ ನಿರ್ಮಿತ ಕೀವ್ ವರ್ಗದ ನಮೂನೆ ೧೧೪೩ ವಿಮಾನ ಧಾರಕ ನೌಕೆಯ ಬದಲಿತ ಆವೃತ್ತಿಯಾಗಿದೆ. ಪ್ರಸ್ತುತವಾಗಿ ಇದು ರಷ್ಯಾದ ಸೆವ್ಮಾಶ್ ನೌಕಾ ನಿರ್ಮಾಣ ಕೇಂದ್ರದಲ್ಲಿ ವಿಸ್ತೃತವಾದ ಮರುಜೋಡಣೆಗೆ ಒಳಪಡುತ್ತಿದೆ. == ರಿಪೇರಿ ನಂತರದ ವಿವರ == ನೌಕೆಯ ತಾಂತ್ರಿಕ ವಿವರ 44,500 ಟನ್ ತೂಕ 284 ಮೀಟರ್ ಉದ್ದ 60 ಮೀಟರ್ ಎತ್ತರ 34 ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ಹೊರುವ ಸಾಮರ್ಥ್ಯ 1,600 ಸಿಬ್ಬಂದಿ ಸಂಖ್ಯೆ 22 ನೌಕೆಯ ಅಂತಸ್ತುಗಳು 13,000 ಕಿ.ಮೀ.ಒಮ್ಮೆ ಇಂಧನ ಭರ್ತಿಯಾದರೆ ನೌಕೆ ಕ್ರಮಿಸುವ ದೂರ 2013ರ ನವೆಂಬರ್‌ನಲ್ಲಿ ಭಾರತೀಯ ನೌಕಾಪಡೆ ಸೇವೆಗೆ ಐಎನ್‌ಎಸ್‌ ವಿಕ್ರಮಾದಿತ್ಯ ಎಂದು ಮರುನಾಮಕರಣ. === ಒಪ್ಪಂದದ ವಿವರ === ಗೋರ್ಶಕೋವ್ ವಿಕ್ರಮಾದಿತ್ಯವಾಗಿ ಬದಲಾವಣೆಯಾದ ನಂತರದ ವಿವರ. ಗೋರ್ಶಕೋವ್ ರಷ್ಯಾ ನೌಕಾಪಡೆಗೆ ಸೇರ್ಪಡೆ : 1987 ರಷ್ಯಾಪಡೆಯಿಂದ ನಿವೃತ್ತಿ :1996 ಅಟಲ್ ಬಿಹಾರಿ ವಾಜಪೇಯ್ ಸರ್ಕಾರದಿಂದ ಅದರ ಖರೀದಿಗೆ ಒಪ್ಪಿಗೆ (ಜಾರ್ರ್ಜ ಫರ್ನಾಂಡಿಸ್) : 2004 ಆರಂಭದ ಒಪ್ಪಂದದ ಮೊತ್ತ : ರೂ.97.4 ಕೋಟಿ ಡಾಲರ್, (ರೂ. 4,285 ಕೋ.) ರಷ್ಯಾದ ಹೆಚ್ಚುವರಿ ಬೇಡಿಕೆ 2014ರಲ್ಲಿ ಯು.ಪಿಯೆ ಒಪ್ಪಿದ ಮೊತ್ತ. :235 ಕೋ.ಡಾಲರ್, (10,575 ಕೋ.ರೂಪಾಯಿ 2010ರ ದರದಲ್ಲಿ) === ೨೦೧೪ ರಲ್ಲಿ ಬದಲಾವಣೆ ನಂತರ ವಿಕ್ರಮಾದಿತ್ಯ === == ನೋಡಿ == ಭಾರತೀಯ ನೌಕಾದಳ ಭಾರತೀಯ ಸೈನ್ಯ == ಉಲ್ಲೇಖಗಳು ==